
ಇನ್ನೂ ಹೆಚ್ಚುಜನರ ಹೆಸರುಗಳ ಪಟ್ಟಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡ್ತಾರಂತೆ ಜಯಲಲಿತಾ ಮೇಡಂ..
ಅಲ್ಲಾ.. ಅಪ್ಪಟ ತಮಿಳುನಾಡಿನ ಪಕ್ಷವಾದ AIADMK (All India ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಇವರೇನು ಕರ್ನಾಟಕವನ್ನು ಪ್ರತಿನಿಧಿಸುವವರಾಗಿಬಿಡುವುದಿಲ್ಲ) ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ತನ್ನ ಜನರನ್ನು ಕಣಕ್ಕಿಳಿಸಿರುವುದರಿಂದ ಬೆಂಗಳೂರಿಗಾಗಲಿ, ಇಲ್ಲಿನ ಕನ್ನಡಿಗರಿಗಾಗಲೀ ಯಾವ ಪ್ರಯೋಜನವಾಗಬಹುದು? ಮೊದಲೇ ಬೆಂಗಳೂರಿನಲ್ಲಿ ಕನ್ನಡದಕೆಲಸಗಳು ನಡೆಯೋದು, ನಡೆಸಿಕೊಳ್ಳೋದು ಎಷ್ಟು ಕಷ್ಟದ ಕೆಲಸ. ನಮ್ಮ ದೇಶದಲ್ಲಿ ಯಾರು ಎಲ್ಲಿ ಹೋದರೂ ಅವರು ಭಾರತೀಯರೇ ಆಗಿರುತ್ತಾರೆ, ನಿಜ. ಆದ್ರೆ, ಈ ರೀತಿ ತಮಿಳು ನಾಡಿನ ಒಂದು ಪ್ರಾದೇಶಿಕ ಪಕ್ಷ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲುತ್ತಿರುವಂತೆ, ಒಂದು ಕನ್ನಡದ ಪಕ್ಷ ತಮಿಳುನಾಡಿನ ಚೆನ್ನೈನಲ್ಲಿ ಚುನಾವಣೆಗೆ ನಿಲ್ಲುವುದು ಸಾಧ್ಯ? ಇಲ್ಲ, ಸಧ್ಯಕ್ಕಂತೂ ಇಲ್ಲ.
ಬೆಳಗಾವಿಯಲ್ಲಿ ಕನ್ನಡಿಗರೊಬ್ಬರು ಮೇಯರ್ ಆಗಲು ಅಲ್ಲಿನ ಕನ್ನಡಿಗರು ಸುಮಾರು ೧೮ ವರ್ಷಗಳಕಾಲ ಕಾದುನೋಡಬೇಕಾಯಿತು. ಕರ್ನಾಟಕ ರಕ್ಶಣಾ ವೇದಿಕೆಯ ಹೋರಾಟದ ಫಲವಾಗಿ ಅಲ್ಲಿ ಈ ದಿನ ಮರಾಟಿಗರ ಬದಲಾಗಿ ಕನ್ನಡಿಗರು ತಮ್ಮ ನೆಲದಲ್ಲಿ ತಾವೇ ಅಧಿಕಾರ ಪಡೆಯುವಲ್ಲಿ ಸಫಲರಾಗಿದ್ದಾರೆ.(ನೋಡಿ)
ಇದೇ ರೀತಿ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ತಮಿಳರು ಅಧಿಕಾರಕ್ಕೆ ಬರುವಲ್ಲಿ ಸಫಲರಾದರೆ ಕನ್ನಡಿಗರಿಗೆ ಎಂಥಾ ಅವಮಾನ. ನಮ್ಮ ರಾಜಧಾನಿಯಲ್ಲಿ ನಾವೇ ಅಧಿಕಾರಕ್ಕಾಗಿ ಬಡಿದಾಡಬೇಕೆ? ಅದೂ ಪಕ್ಕದ ತಮಿಳುನಾಡಿನ ಪ್ರಾದೇಶಿಕ ಪಕ್ಷದೊಂದಿಗೆ?
ಕರ್ನಾಟಕ ರಕ್ಷಣಾ ವೇದಿಕೆಯನ್ನ ಒಂದು "fringe group" ಅಂತ ಕರೆಯೋ, ಅವರನ್ನು ಅಥವಾ ಅವರಂತೆ ಕನ್ನಡ, ಕರ್ನಾಟಕಗಳೀಗಾಗಿ ಕೆಲಸ ಮಾಡುವವರನ್ನು, ಹೋರಾಡುವವರನ್ನು "regional" ಅಂತಾ ಬಿಂಬಿಸೋ ನಮ್ಮ ದೇಶದ English ಮೀಡಿಯಾ ಅಂದ್ರೆ, so called national ಮೀಡಿಯಾ ಎಐಎಡಿಎಂಕೆ ಬಗ್ಗೆ ಏನೂ ಹೇಳದಿರುವುದಕ್ಕೆ ಕಾರಣ ಏನಿರಬಹುದು?(ನೋಡಿ,ಇದೂ ನೋಡಿ) ದೆಲ್ಲಿಯಲ್ಲಿನ ಸರ್ಕಾರವನ್ನ ಹೇಗಾದರೂ ಮಾಡಿ ತಮ್ಮ ಹಿಡಿತದಲ್ಲಿರಿಸಿಕೊಂಡು, ಕೇವಲ ತಮ್ಮ ರಾಜ್ಯಕ್ಕೆ(ಪಕ್ಕದ ರಾಜ್ಯಕ್ಕೆ ಕೆಡುಕು ಮಾಡಿ) ಕೆಲಸಮಾಡುವ ಎಐಎಡಿಎಂಕೆ-ಗೆ ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಲು ಯಾವ ಅರ್ಹತೆಗಳಿವೆ? ನಮ್ಮದು ಗಣತಂತ್ರ ಅಂದ ಮಾತ್ರಕ್ಕೆ, ಈ ರೀತಿಯ ಒಂದು ಪ್ರಾದೇಶಿಕ ಪಕ್ಷ ಇನ್ನೊಂದು ರಾಜ್ಯದಲ್ಲಿ ಹೋಗಿ ಚುನಾವಣೆಗೆ ನಿಲ್ಲಬಹುದಾದರೆ, ಇಂತಹ ಒಂದು ವ್ಯವಸ್ಥೆಯಿಂದ ಭಾರತದ ಜನತೆಗೆ ನಿಜವಾದ ಉಪಯೋಗ ಏನೂ ಇಲ್ಲ. ಜಯಲಲಿತಾ, ಮಾಯಾವತಿ ಮುಂತಾದವರು ಕೇವಲ ತಮ್ಮ ತಮ್ಮ ರಾಜ್ಯಗಳಿಗಾಗಿ (ಅದಕ್ಕಿಂತ ಹೆಚ್ಚಾಗಿ ತಮ್ಮ ಒಳಿತಿಗಾಗಿ) ಕೆಲಸಮಾಡುವವರು.
ಬೆಂಗಳೂರಿನ ಬಗ್ಗೆ, ಇಲ್ಲಿನ ಜನರ ಬಗ್ಗೆ, ಇಲ್ಲಿನ ಸಂಸ್ಕೃತಿಯಬಗ್ಗೆ, ಈ ಊರಿನ ಇತಿಹಾಸದ ಬಗ್ಗೆ ಏನೇನೂ ತಿಳುವಳಿಕೆ, ಪ್ರೀತಿಗಳಿಲ್ಲದವರಿಂದ ಬೆಂಗಳೂರಿಗೆ ಒಳಿತಾಗಲು ಹೇಗೆ ಸಾಧ್ಯ? ಸಂವಿಧಾನದ ಪ್ರಕಾರ ಇವರುಗಳು ಬೆಂಗಳೂರಲ್ಲಿ ಬಂದು ಚುನಾವಣೆಗೆ ನಿಲ್ಲುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ರೆ, ಇವರನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಸಾಧ್ಯವಿದೆ. ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಜನರನ್ನ ಕಣಕ್ಕಿಳಿಸಿದೆ. ಕರ್ನಾಟಕದ ಜನತೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿರುವ ಈ ಪಕ್ಷ ಅದಿಕಾರಕ್ಕೆ ಬಂದು, ಬೆಂಗಳೂರಿಗೆ ಒಳ್ಳೆಯದನ್ನು ಮಾಡಲಿ. ಕರ್ನಾಟಕಕ್ಕೆ ಬಹುವರ್ಷಗಳಿಂದ ಅವಶ್ಯವಾಗಿರುವ ಪ್ರಾದೇಶಿಕ ಪಕ್ಷವಾಗಿ ಕ.ರ.ವೇ ಬೆಳೆದು ಕರ್ನಾಟಕಕ್ಕೆ ಒಳ್ಳೆಯದಿನಗಳು ಆರಂಭವಾಗಲಿ ಎನ್ನುವುದೇ ನನ್ನ ಹಾರೈಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ